ಅಪ್ಪೇಹುಳಿ v/s ಗಸಗಸೆ ಪಾಯಸ

"ನಿದ್ದೆ" ಇದು ಬಂದ್ರೆ ಎಲ್ಲಾ ಮರೀಬಹುದು. ಬರದಿದ್ರೆ ???
ಬರೆದಿದ್ರೆ ಎನ್ನುವ ವಿಚಾರವೇ ಒಮ್ಮೊಮ್ಮೆ nightmare ಆಗಿ ಕಾಡಿ ಅದಕ್ಕೇ ನಿದ್ದೆ ಬರದಿದ್ದುದುಂಟು..
ಕೆಲವರು ಸಂತೆಯಲ್ಲಿಯೂ ನಿದ್ದೆ ಮಾಡಬಲ್ಲರು, ಅವರು ಬಗ್ಗೆ ಹೇಳುತ್ತಿಲ್ಲ. ಕೆಲವರು ಚೆನ್ನಾಗಿ ಮಲಗಿ ಗೊರಕೆ ಹೊಡೆದು ಆಮೇಲೆ ನಿದ್ದೆ ಆಗಿಲ್ಲ ಎನ್ನುವವರೂ ಉಂಟು. ಅವರ ಬಗ್ಗೆಯೂ ನಾನೂ ಹೇಳುತ್ತಿಲ್ಲ. ಒಂದು ದೊಡ್ಡ ಸಂಖ್ಯೆಯ ಜನ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅಂದರೆ ನಿಗದಿತ ಸಮಯದಲ್ಲಿ, ಆಳವಾದ ನಿದ್ರೆ ಇಲ್ಲದೇ ಇರುವುದರಿಂದ ತೊಂದರೆ ಪಡುವವರು. ಸುಮಾರು ೪೦ ವಷ೯ ದಾಟಿದವರೆಲ್ಲ ಈ ಸ್ಥಿತಿ ಅನುಭವಿಸಿಯೇ ಇರುತ್ತಾರೆ.
ಸಾಮಾನ್ಯವಾಗಿ ನಮಗೆ ನಿದ್ದೆ ಏಕೆ ಬರ್ತಾ ಇಲ್ಲ ಎನ್ನುವ ವಿಚಾರ ಸ್ವಲ್ಪ ವಿಶ್ಲೇಷಣೆ ಮಾಡಿದರೆ ಅಥ೯ ಆಗುವಂತದ್ದೇ. ಯೌವನದಲ್ಲಿ ಪ್ರೀತಿ, ಮದ್ಯ ವಯಸ್ಸಲ್ಲಿ ಚಿಂತೆ ಮತ್ತು ಇಳಿ ವಯಸ್ಸಿನಲ್ಲಿ ವಯೋ ಸಹಜವಾಗಿ ನಿದ್ರಾ ಹೀನತೆ ಆಗುವುದು ಗೊತ್ತಿರುವ ವಿಷಯವೇ.
ನಿದ್ರಾ ಹೀನತೆಗೆ ಬೇಕಾದಷ್ಟು ಸಲಹೆ ಸೂಚನೆ ಎಲ್ಲರೂ ಕೊಡುವುದೇ, ಆದರೆ ಯಾವುದನ್ನು ನೆನಪಿಸಿಕೊಳ್ಳೋಣ ಹೇಳಿ?
ಹವ್ಯಕ ಬ್ರಾಹ್ಮಣರಲ್ಲಿ ನಿದ್ರಾಹೀನತೆಗೆ ಮೊದಲು ಸಿಗುವ ಸಲಹೆ, ಅಪ್ಪೇಹುಳಿ ಊಟ ....ಇದು ನಮ್ಮ ಗುರುತಿನ ಚೀಟಿಯೇ ಸೈ.
ಹವ್ಯಕೇತರರು ನೀಡುವ ಸಲಹೆ ಗಸಗಸೆ ಪಾಯಸ.

ಈ ಕೊರೋನ ಸೋಂಕು, ಸಾವು,‌ ಲಾಕ್ ಡೌನ್.... ಮುಂದೇನು? Economy shrink???Job security???..ಮಕ್ಕಳು ಭವಿಷ್ಯ..... ಯೋಚಿಸುತ್ತಾ ಗಂಟೆ ರಾತ್ರಿ 11....12...01..02.... ಹೀಗೆ ದಿನದಿಂದ ದಿನಕ್ಕೆ ನಿದ್ರಾ ಸಮಯ ಮುಂದೂಡುತ್ತಿರಲು, ಈ ವಾರವೆಲ್ಲ ಅಪ್ಪೇಹುಳಿ, ಗಸಗಸೆ ಪಾಯಸಕ್ಕೆ ಸ್ಪರ್ಧೆ ಏಪಾ೯ಟ ಮಾಡೋ ಯೋಚನೆ ಮಾಡಿದಾಗ ಕಣ್ಣು ಎಳೆಯಲು ಪ್ರಾರಂಭ, ಆಗ 3 ಗಂಟೆ.
___________&&&&&&____________&&&&_____
ಅಪ್ಪೇಹುಳಿ(you can say raw mango cold rasam)
ಒಂದು ಮಾಧ್ಯಮ ಗಾತ್ರದ ಮಾವಿನ ಕಾಯಿ ಯನ್ನು
ಬೇಯಿಸಿ ಸಿಪ್ಪೆ ತೆಗೆದು ಕಿವುಚಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಬೆಲ್ಲ ಸೇರಿಸಿ.ಮಾವಿನ ಕಾಯಿ ಪಲ್ಪ್ ನನ್ನು ಚೆನ್ನಾಗಿ ಕಲಸಿ ಸಾಕಷ್ಟು ನೀರು ಹಾಕಿ ರಸಂನ ಹದ ಇರಲಿ..ಈಗ ಒಗ್ಗರಣೆ.ಇದಕ್ಕೆ ತೆಂಗಿನೆಣ್ಣೆ ಉಪಯೋಗ ರುಚಿ ಕೊಡುತ್ತದೆ.
ಒಗ್ಗರಣೆ ಸೌಟಿನಲ್ಲಿ ಎರಡು ಚಮಚೆ ತೆಂಗಿನೆಣ್ಣೆ ಕಾಯಿಸಿ ಒಂದೆರಡು ಬ್ಯಾಡಗಿ ಮೆಣಸಿನಕಾಯಿ,ಒಂದು ಹಸಿ ಮೆಣಸಿನಕಾಯಿ ಸೀಳಿ ಎಣ್ಣೆಯಲ್ಲಿ ಹಾಕಿ.ಅಧ ೯ ಚಮಚ ಉದ್ದಿನಬೇಳೆ,ಅಧ೯ ಚಮಚ ಸಾಸಿವೆ ಹಾಕಿ ಸಿಡಿಸಿ, ಚಿಟಿಕೆ ಇಂಗು,ನಾಲ್ಕೈದು ಕರಿಬೇವು ಹಾಕಿ ಸೀದಾ ಕಲಸಿಟ್ಟ ಮಾವಿನ ಪಲ್ಪ್ ಗೆ ಹೊಯ್ಯಿರಿ. ಇಲ್ಲಿ ಇಂಗಿನ ಬದಲಾಗಿ ಬೆಳ್ಳುಳ್ಳಿ ಹಾಕಬಹುದು.ಆಗ ಕರಿಬೇವು ಬೇಡ.ಒಗ್ಗರಣೆ ನಂತರ ಕೈ ಯಿಂದ ಮೆಣಸಿನಕಾಯಿ ಕರಿಬೇವು ನನ್ನು ಹಿಸುಕಿ ಕಲೆಸಬೇಕು.
ಇದು ಬಿಸಿ ಅನ್ನ ದ ಜೊತೆ ಅಥವಾ ರಸಂ ತರಹ ಕುಡಿಯಲೂ ಬಹುದು.
ಇದನ್ನು ಬೆಂಗಾಲಿ ಸ್ಟೈಲ್, ಆಮ್ ಪನಾ ಗೆ ಹೋಲಿಸಬಹುದು. ಮಾವಿನ ಕಾಯಿಯ ತಿರುಳನ್ನು ಮಿಕ್ಸಿಯಲ್ಲಿ ರುಬ್ಬಿ ಸೋಸಿಕೊಂಡು ಅದಕ್ಕೆ  ಸ್ವಲ್ಪ ಉಪ್ಪು,ಸಕ್ಕರೆ ಹಾಗೂ ಜೀರಿಗೆ ಪುಡಿ ಬೆರೆಸಿದರೆ ಆಯಿತು.
                       ಆಮ್ ಪನ್ನಾ
--++++++++++++++++++++++++++++--
                  ಗಸಗಸೆ ಪಾಯಸ
ಎರಡು ದೊಡ್ಡ ಚಮಚ ಗಸಗಸೆಯನ್ನು ತುಪ್ಪದಲ್ಲಿ ಹುರಿದು,ಒಂದು ಹಿಡಿ ಗೋಡಂಬಿಯನ್ನೂ ಹುರಿದು,ಒಂದು ಕಪ್ ತೆಂಗಿನ ಕಾಯಿ ತುರಿ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.ನಂತರ ಕೆನೆ ಭರಿತ ಹಾಲಿನೊಂದಿಗೆ ತಳ ಹಿಡಿಯದಂತೆ ಕುದಿಸಿ.ಈಗ ಸಿಹಿಯಾಗುವಷ್ಟು ಸಕ್ಕರೆ  ಸೇರಿಸಿ ಮತ್ತೆ ಕುದಿಸಿ.ತುಪ್ಪದಲ್ಲಿ ಕರಿದ ಗೋಡಂಬಿ ದ್ರಾಕ್ಷಿ ಸೇರಿಸಿ ಒಂದು ಚಿಟಿಕೆ ಏಲಕ್ಕಿ ಪುಡಿ ಹಾಕಿ, ಪಾಯಸ ಕುಡಿಯಲು ರೆಡಿ.
 ಹಿಂದಿನ ವಾರ ಪರ್ಯಾಯವಾಗಿ ಅಪ್ಪೇಹುಳಿ ಹಾಗೂ ಗಸಗಸೆ ಪಾಯಸ ತಿಂದು ನಿದ್ರೆಗಾಗಿ ಕಾದಿದ್ದೇ ಆಯ್ತು.
ಪಕ್ಕದಲ್ಲಿ ಯಜಮಾನರು ಗಡದ್ದಾಗಿ ನಿದ್ದೆ ಹೊಡಿತಿದ್ದುದನ್ನು ನೋಡಿ ನಾಳೆ ಯಾವ ರೀತಿ ಮಾಡಿದರೆ ಒಳ್ಳೆಯ ನಿದ್ದೆ ಮಾಡಬಹುದು ಎಂದು ಯೋಚಿಸತೊಡಗಿದೆ.🤔🤔

ಶಶಿ ಭಾಸ್ಕರ.




Comments