ಸರಿ???-ತಪ್ಪು???
ನಮಸ್ಕಾರ, ಏಪ್ರಿಲ್ 14, ಮುಗಿಯಿತು ಲಾಕ್ ಡೌನ್ ಎನ್ನುವಷ್ಟರಲ್ಲಿ ಮೇ ೩ ರ ವರೆಗೆ ಮುಂದೂಡಿಕೆ. ಈ ಸಮಯದಲ್ಲಿ ನಾನೊಂದು blog create ಮಾಡಿ..,ಕನ್ನಡ ವಾಯ್ಸ್ ಟೈಪಿಂಗ್ ಮೂಲಕ ಇವತ್ತಿನ ವಿಚಾರ ಬರೆಯುವ ಹಾಗಾಗಿದ್ದು ನನ್ನ ಸಾಧನೆ 😀. 21ದಿನಗಳ ಲಾಕ್ ಡೌನ್ ನಲ್ಲಿ ಬಹಳ ಮಂದಿ ಬಹಳ ವಿಚಾರ ಕಲಿತಿದ್ದು ಹೆಮ್ಮೆಯ ವಿಷಯ. ಬಹಳ ಜನ ಅಡಿಗೆ ತಿಂಡಿ ವಿಚಾರದಲ್ಲಿ ತುಂಬಾ ಆಸಕ್ತಿ ತೋರಿಸಿದ್ದು ಕಂಡುಬಂತು. ಆದರೆ ಒಂದು ಜಿಜ್ಞಾಸೆ ಶುರುವಾಗಿದೆ ನನಗೆ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಖುಷಿ ಯಿಂದ ತಾವು ಮಾಡಿದ ಅಡಿಗೆ ವರ್ಕೌಟ್ ವಿಡಿಯೋ, ಹಾಡು, ಹಸೆ ಇತ್ಯಾದಿಗಳ ವಿವರಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ನೋಡಿ ಕೆಲವರು ಈ ಸಂಕಟದ ಸಮಯದಲ್ಲಿ, ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳು, ಕಾನೂನು ಪಾಲಕರು ಎಲ್ಲರೂ ಸೈನಿಕರು ಯುದ್ಧವನ್ನು ಎದುರಿಸುವ ರೀತಿಯಲ್ಲಿ ಹೋರಾಡುತ್ತಿದ್ದಾರೆ, ಆದರೆ ಮನೆಯಲ್ಲಿ ಕುಳಿತಿರುವ ಜನರು ಈ ರೀತಿಯಾಗಿ ಯಾವುದೋ ಆಚರಣೆಯನ್ನು ಆಚರಿಸುತ್ತಿರುವಂತೆ ವರ್ತಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮನೆಯಲ್ಲೇ ಬಂದಿಯಾಗಿ, ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಜನರು, ಮಕ್ಕಳು ಏನು ಮಾಡಬೇಕು? ಹೇಗೆ ಸಮಯವನ್ನು ಕಳೆಯಬೇಕು? ಎಲ್ಲರೂ ಒಳಿತಿಗೋಸ್ಕರ ಭಗವಂತನಲ್ಲಿ ಪ್ರಾರ್ಥಿಸಬೇಕು ನಿಜ. ಮನಸೆಂಬ ಮರ್ಕಟನನ್ನು ನಾವು ಹೇಳಿದಂತೆ ಕೇಳುವ ಹಾಗೆ ಮಾಡುವುದು ಸುಲಭವಲ್ಲ.ಎಲ್ಲರೂ ಆ ವಿದ್ಯೆ ಬಲ್ಲವರಲ್...