ಜೀವನೋತ್ಸಾಹ


Covid-19 pandamic ನ ಮಧ್ಯೆ ಜೀವನದಲ್ಲಿ ಉತ್ಸಾಹ ಕಳೆದುಕೊಂಡ ಒಂದು ದಿನ ಈ ಗುಲಾಬಿ ಗಿಡ ಕಣ್ಣಿಗೆ ಬಿತ್ತು.ನಮ್ಮ‌ ಮನೇದೇ ....ಆದರೆ ಕಾಂಡ ಒಣಗಿ ಸತ್ತಿದೆ ಎಂದು ನೀರು ಹಾಕದೇ ಬಿಟ್ಟು, ಬಹಳ ದಿನಗಳ ನಂತರ ಬಂದ ಒಂದೆರಡು ಮಳೆಗೆ ಹೀಗೊಂದು ಚಿಗುರಿನೊಂದಿಗೆ ಪುನಃ ಜೀವಿಸುವ ಛಲ ತೋರಿಸುತ್ತಾ ನನ್ನೆಡೆಗೆ ನೋಡಿ ಹೇಗೆ ಎಂದು ಹುಬ್ಬೇರಿಸಿದಂತೆ ಭಾಸವಾಯಿತು.ತದನಂತರ ನಾಲ್ಕಾರು ಹೂ ಬಿಟ್ಟು ನಗು ಬೀರಿ ಖುಷಿಯಾಗಿದ್ದಾಳೆ ಕೂಡ.
ಮನೆಯೆದುರಿನ ಹೊಂಗೆ ಮರ ಕೂಡ, ಅಲ್ಲಿ ಸೈಟ್ ಕ್ಲೀನ್ ಆಗ್ಲಿ ಅಂತ ಯಾರೋ ಹಾಕಿದ ಬೆಂಕಿಗೆ ಸುಟ್ಟು ಕರಕಲಾಗಿ ನಂತರ ಎಂಟೇ ದಿನದಲ್ಲಿ ಪುನಹ ಹಸಿರೆಲೆ ಯಿಂದ ಕಂಗೊಳಿಸಿದ್ದನ್ನು ನೋಡಿ, ನಂಗೂ ಜೀವನೋತ್ಸಾಹ ಹೆಚ್ಚಿದ್ದು ‌‌‌ಈಗ ಹಳೇ ಕತೆ.ಈಗ ಮತ್ತೆ ಮೋಡ ಮುಸುಕಿದ ವಾತಾವರಣ 😔😔.
ಈ ,'mood swing,' ಗೆ ಕನ್ನಡದಲ್ಲಿ ಚಿತ್ತಚಾಂಚಲ್ಯ ಎಂದರೆ ಆಭಾಸವಾಗುವುದೇನೋ.ಆದರೆ ಈ ಮನಸ್ಸು, ಗಳಿಗೆಗೊಂದು ನಿಮಿಷಕ್ಕೊಮ್ಮೆ ಬದಲಾಗುವುದು ನೋಡಿದರೆ ಹೂಸ ಶಬ್ದವನ್ನೇ ಹುಡುಕಬೇಕಿದೆ.ಅದೂ 40 ರ ನಂತರದ ಮನಸ್ಸುನ್ನು ಪಳಗಿಸಲು ನಾ ಮಾಡಿದ ಪ್ರಯತ್ನವನ್ನು ಬರೆಯಲು ಅದು ಪ್ರಬಂಧವೇ ಆದೀತು. ಈ ಅನುಭವ ಹೆಚ್ಚಿನ ಮಹಿಳೆಯರಲ್ಲಿ ಆಗಿರಬಹುದು. ಆದರೆ ಪುರುಷರಿಗೆ ಈ ಕಷ್ಟವೇಕಿಲ್ಲ 🤔. ಮೆನೋಪಾಸ್ ಎನ್ನುವ ಭೂತ ಮಹಿಳೆಯರಿಗೊಂದೇ ಕಾಡಬೇಕಾ? ಈ ಜಿಜ್ಞಾಸೆಯನ್ನು ತೆರೆದಿಟ್ಟಾಗ, ಒಬ್ಬರಂತೂ ಹೀಗೆಂದರು...ನೀವು ಮಹಿಳೆಯರು, ದೇವರಲ್ಲಿ ಪ್ರಾರ್ಥನೆ ಮಾಡಿ... ಪುರುಷರಿಗೂ ಜೀವನದ ಆ ಹಂತ ದಯಪಾಲಿಸು ಎಂದು.ಎಂತ ಧಾಷ್ಟ್ಯ. ಹೊರಗಾಗುವ ಚಿಂತೆ ಇಲ್ಲ, ಹೆರುವ ನೋವಿಲ್ಲ, ಓ ದೇವರೇ ಎಂತ ಸುಖ ಜೀವನ ಕೊಟ್ಟೆ ಎನ್ನುವ ಬದಲು ಹೀಗೆನ್ನುವ ಗಂಡಸರನ್ನು ...ಹೆತ್ತವಳೂ ಹೆಣ್ಣೇ. ಯಾಕೋ ಇವಳು feminist or feminazi ತರಾ ಯೋಚನೆ ಮಾಡ್ತಾ ಇದ್ದಾಳಲ್ಲಾ ಅಂದ್ಕೋಬೇಡಿ.ನಮ್ಮ ಕಷ್ಟ ಅಥ್೯ ಮಾಡ್ಕೊಂಡು ‌‌‌‌‌‌‌‌ನಮ್ಮ ಜೊತೆ  ನೋವನುಭವಿಸುವಂತ ಗಂಡಸರೂ ಇದ್ದಾರೆ.ಇಲ್ವೆಂದಲ್ಲ.
ಒಂದೆರಡು ಉದಾಹರಣೆಗಳಿಂದ ಸಾಮಾನ್ಯೀಕರಿಸಲಾಗದು.ಆದರೆ ಇಂತಹ‌ ಜಿಜ್ಞಾಸೆ ನಮ್ಮ 40 ರ ಹರೆಯದ ಜೀವನೋತ್ಸಾಹ ಕುಂದಿಸುವಾಗ .......ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೇ....🙏🙏
😃😃ಅಯ್ಯೊ,ಎನಿದು ಫುಲ್ U ಟನ್೯ ಅಂದ್ಕೋಬೇಡಿ.ಕೆಲವೊಮ್ಮೆ ಎಲ್ಲವನ್ನೂ ದೇವರಿಗೆ ಬಿಟ್ಟು ಸುಮ್ನೆ ಕಾಯಬೇಕು.ಈಗ ಕರೋನ ಪರಿಸ್ಥಿತಿ ನೇ ನೋಡಿ.... ಎಲ್ಲರೂ ಕಾಯ್ತಾ ನೇ ಇದ್ದೀವಿ, ಯಾವಾಗ ಮುಗಿಯುತ್ತದೆ ಎಂದು.
 ನನ್ನ ಬ್ಲಾಗ್ ನ ಈ  ಅವತರಣಿಕೆ ಯಲ್ಲಿ ಇನ್ನೊಂದು  one of my favourites "blissful chanting" ನ  ಲಿಂಕ್ ... ಕೇಳಿ.
ಇದು ಬಹಶಃ ವ್ಯಾಸರಾಯರು ಕನ್ನಡದಲ್ಲಿ ರಚಿಸಿದ್ದಿರಬಹುದು.ಕರಿರಾಜನು ಆ ಮಹಾವಿಷ್ಣು ದೇವರನ್ನು ದಶಾವತಾರದ ವರ್ಣನೆ ಯೊಂದಿಗೆ ಮೊರೆಯಿಟ್ಟು ಸಾಕ್ಷಾತ್ಕಾರ ಮಾಡಿಕೊಂಡಿದ್ದನ್ನು  ಹಾಡಿಕೊಂಡು,ಅವನ ಅಭಯ ಹಸ್ತ ನಮ್ಮ ಮೇಲಿದೆ ಎಂದು ಅರಿವಾದರೆ male chauvinism ಪಾರ್ಟಿ ಗಳನ್ನೇನು ಬಿಡಿ,ಕರೋನಾ ನೇ ಓಡಿಸ್ಬಹುದು.😉😉
ಶಶಿ ಭಾಸ್ಕರ್.




Comments